Saturday, November 7, 2009

ನಾವೂ ಅನಾಥರು... ಒಮ್ಮೊಮ್ಮೆ................................................................

ದೀಪಾವಳಿ ಮೊನ್ನೆ ಮೊನ್ನೆ ಮುಗಯಿತಲ್ಲ... ಅದರ ೨ ದಿನಗಳ ಮೊದಲು ಸುಮಾರು ೧೨-೧ ಘಂಟೆ ಮಧ್ಯಾಹ್ನದ ಹೊತ್ತು ನನ್ನ ಅಂಗಡಿಯಲ್ಲಿ ಕುಳಿತ್ತಿದ್ದೆ.  ಒಬ್ಬ ಸುಮಾರು ೨೫-೩೦ರ ವಯಸ್ಸಿನ ಯುವಕ ಬಂದು ನನ್ನೆದುರು ನಿಂತ. ನಾನು ಸ್ವಾಭಾವಿಕವಾಗಿ ಏನು ? ಎಂದೆ.
ನಾನು ಶಿವಮೊಗ್ಗದಿಂದ ಕಾರವಾರ ಹೋಗುವಾಗ , ನಿನ್ನೆ ರಾತ್ರಿ ಸಾಗರದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೇನೆ ಈಗ ಕನಿಷ್ಡ ಹೊನ್ನಾವರ ಹೋಗಲು ಬಸ್ ಖರ್ಚಿಗೆ ಹಣ ಬೇಕು ಎಂದು  ಹೇಳಿದ.
ನಾನು ಸ್ವಲ್ಲ ಕರುಣಾಳು ಆದರು ಕೂಡ ಆರೋಗ್ಯವಂತರಿಗೆ ಎನೂ ಕೊಡುವ ರಿವಾಜು ಇಟ್ಟುಕೊಂಡಿಲ್ಲ. ಆದರೂ ಹಬ್ಬದ ಎದುರು ನೋಡಿ...! ಸ್ವಲ್ಲ ದಯೆ ಬಂತು..!
ಹೊನ್ನಾವರ ಬಸ್ ಇದೆಯಾ ನೋಡು , ಇದ್ದರೆ ಬರ್ಸ ಚಾರ್ಜ್ ನಾನು ಕೊಡುತ್ತೇನೆಂದು ಹೇಳಿ, ಅಲ್ಲೆ ಬಂದ ನನ್ನ ಗೆಳೆಯನ ವಾಹನದಲ್ಲಿ ಕಳುಹಿಸಿದೆ.
ಹಿಂದಿನ ನನ್ನ ಅನುಭವಗಳ ಪ್ರಕಾರ ಬಸ್ ಟಿಕೇಟ್ ತೆಗೆಸುತ್ತೇನೆ ಎಂದರೆ ಆಸಾಮಿಗಳು ಪರಾರಿಯಾಗುತ್ತಿದ್ದರು, ಆದರೆ ಈ ಸಾರಿ
ಹತ್ತೇ ನಿಮಿಷಗಳಲ್ಲಿ ಆತ ಮರಳಿ ಬಂದು ೨-೩೦ಕ್ಕೆ ಬಸ್ ಇರುವುದಾಗಿ ಹೇಳಿದ. ನಾನು ಕೂಡ ನನ್ನ ಮಾತಿನಂತೆ ಬಸ್ ನಿಲ್ದಾಣಕ್ಕೆ ಆತನನ್ನು ಕರೆದೊಯ್ದು, ಟಿಕೇಟ್ ತೆಗಿಸಿ, ಆತನಿಗೆ ೧೦ ರೂ ಖರ್ಚಿಗೆ ಇಟ್ಟು ಬಂದೆ.
ಇದೆಲ್ಲ ಯಾಕೆ ಹೇಳತ್ತಾ ಇದ್ದೇನೆಂದ್ರೆ, ನಾವುಗಳು ಪರ ಊರಲ್ಲಿ  ಎಲ್ಲ ಕಳೆದುಕಂಡರೆ ನಮ್ಮ ಗತಿ ಏನಾಗಬಹುದು?
ದೇವರೇ ಗತಿ. ಅವನಲ್ಲಿ ೧ ರೂ ಕೂಡ ಇರಲಿಲ್ಲ ಹಾಗೂ ಸೆಲ್ ಫೋನ್ ಕೂಡ ಕಳೆದುಕೊಂಡಿದ್ದ.....

6 comments:

ಮನಸು said...

ಎಷ್ಟೋ ಜನ ಹಣವಿಲ್ಲ ಕಳೆದುಹೋಯ್ತು ಎಂದು ಬರುತ್ತಾರೆ ಆದರೆ ಅವರಲ್ಲಿ ಯಾರು ನಿಜ ಹೇಳುತ್ತಾರೋ ಗೊತ್ತಾಗುವುದಿಲ್ಲ, ಆದರೆ ನಿಜ ಕಷ್ಟದಲ್ಲಿ ಇರುವವರಿಗೆ ತೊಂದರೆಯೊ ಆಗುತ್ತೆ..
ನೀವು ಹಣ ಕೊಡುವ ಬದಲು ಟಿಕೆಟ್ ಕೊಡಿಸಿದ್ದು ಒಳ್ಳೆ ಕೆಲಸ ನಿಜವಾಗಿ ಆ ವ್ಯಕ್ತಿಗೆ ಅವಶ್ಯಕತೆ ಇತ್ತೆಂದು ತಿಳಿಯುತ್ತದೆ.
ನಿಮ್ಮ ಸಹಾಯಹಸ್ತ ಸದಾ ಇರಲಿ ಒಳಿತಿಗಾಗಿ ಹಾಗು ಇಲ್ಲದವರಿಗಾಗಿ..

ಶಿವಪ್ರಕಾಶ್ said...

ಒಳ್ಳೆಯ ಕೆಲಸ ಮಾಡಿದಿರಿ...
ನಮ್ಮ ಪರವಾಗಿ ನಿಮಗೆ ಧನ್ಯವಾದಗಳು :)

ಸಾಗರದಾಚೆಯ ಇಂಚರ said...

ಯಾರು ನಿಜ ಹೇಳ್ತಾರೆ, ಯಾರು ಸುಳ್ಳು ಹೇಳ್ತಾರೆ ಅಂತ ಗೊತ್ತಾಗೊಲ್ಲ,
ಇದ್ರಿಂದ ನಿಜ ಹೇಳೋವ್ರಿಗೂ ಅನ್ಯಾಯ ಆಗುತ್ತೆ
ನಿಮ್ಮ ದಾನ ಮೆಚ್ಚಬೇಕಾದ್ದೆ

ಸುಪ್ತವರ್ಣ said...

ಇಂಥ ಅನುಭವಗಳು ನನಗೂ ಆಗಿವೆ. ಕೆಲವು ಸಲ ಕೊಟ್ಟಿದ್ದೇನೆ, ಇನ್ನು ಕೆಲವು ಸಲ ಕೊಟ್ಟಿಲ್ಲ. ಹಣದ ಬದಲು ಟಿಕೇಟು ತೆಗೆಸುವುದು ಒಳ್ಳೆಯ ಉಪಾಯ. ಮುಂದಿನ ಸಲ ಇದನ್ನು ನೆನಪಿಟ್ಟುಕೊಳ್ಳುತ್ತೇನೆ!

ದಿನಕರ ಮೊಗೇರ.. said...

ತುಂಬಾ ಉತ್ತಮ ಸಲಹೆ , ಉಪಾಯವನ್ನ ಹೇಳಿ ಕೊಟ್ಟಿದ್ದೀರಿ ನಮಗೆಲ್ಲಾ.... ತುಂಬಾ ಧನ್ಯವಾದ.... ಮೋಸ ಹೋದವರ ಹಾಗೆ ಸೋಗು ಹಾಕುವವರ ಮದ್ಯೆ ನಮಗೆ ನಿಜವಾದವರನ್ನ ಗುರುತಿಸುವುದು ಕಷ್ಟವಾಗುತ್ತಿದೆ....

hemanth said...

anna olle kelasa madidde